ಸೀನು ರಾಮಸಾಮಿ ಅವರ ಕವಿತೆಗಳು ಈಗಿನ ಆಧುನಿಕ ಕಾವ್ಯ ನಿರೂಪಣೆಯ ಚೌಕಟ್ಟಿನಲ್ಲಿ ರಚಿಸಲ್ಪಟ್ಟಿವೆ. ಕವಿತೆಗಳನ್ನು ಈ ಮಾನದಂಡ, ಅಳತೆಯಲ್ಲಿಯೇ ಬರೆಯಬೇಕು ಎಂಬ ಯಾವ ವಿಧಾನಗಳನ್ನು ಅಂಟಿಸಿಕೊಳ್ಳದೇ ತಮಗನಿಸಿದ ರೀತಿಯಲ್ಲಿಯೇ ಕವಿತೆಗಳನ್ನು ಸಹಜವಾಗಿ ಕಟ್ಟುವ ಪ್ರಯತ್ನ ಮಾಡಿರುವುದನ್ನು ಇಲ್ಲಿ ಕಾಣಬಹುದಾಗಿದೆ. ಅವರ ರಚನೆಯಲ್ಲಿ ತಮಿಳುನಾಡಿನ ಪ್ರಸ್ತುತ ವಾತಾವರಣ, ಅಲ್ಲಿನ ರಾಜಕೀಯ ಚಿಂತನೆಗಳು, ಅವುಗಳೊಂದಿಗಿನ ಜನಸಾಮಾನ್ಯರ ಬದುಕು ಜೊತೆಗೆ ವೈರುಧ್ಯದ ಹೋರಾಟ, ತಾವಿರುವ ಸಿನಿಮಾ ಕ್ಷೇತ್ರ, ಎಲ್ಲವೂ ಅವರ ಕವಿತೆಗಳ ವಸ್ತುಗಳಾಗಿವೆ. ಆಯಾ ಕಾಲಘಟ್ಟದ ಸಾಮಾಜಿಕ ಚಿತ್ರಣಕ್ಕೂ ಅವರದ್ದೇ ಆದ ನಿಲುವುಗಳಿವೆ. ಸಂಘರ್ಷದಲ್ಲಿ ಉದ್ಭವಿಸಿದ ಪ್ರಶ್ನೆಗಳು ಅವರ ಕವಿತೆಯಲ್ಲಿ ಉತ್ತರಗಳಾಗಿವೆ. ಪ್ರಸಿದ್ಧ ಆಂಗ್ಲಕವಿ 'Poets are the unacknowledged legislators of the world' ಎಂದು ಹೇಳುತ್ತಾನೆ. ಅದರಂತೆಯೇ ತಮ್ಮ ಕವಿತೆಯ ಮೂಲಕ ತಾವಿರುವ ನಗರ ಕೇಂದ್ರಿತ ಬದುಕು. ಇಂದಿನ ಹೋರಾಟ, ಸಮಾಜವನ್ನು ದಾಖಲಿಸುವ ಕವಿಗಳಲ್ಲಿ ಸೀನು ರಾಮಸಾಮಿ ಕೂಡ ಒಬ್ಬರಾಗಿ ಗಮನ ಸೆಳೆಯುತ್ತಾರೆ.
- ಶ್ರೀಧರ ಬನವಾಸಿ
Be the first to rate this book.